ರೈಲಿಗೆ ಬೆಂಕಿಹಾಕಿ ಭವ್ಯ ಭಾರತದ ಭಾವಿ ಪ್ರಜೆಗಳು ಏನ್ ಮಾಡ್ತಿದ್ರು ನೋಡಿ
ಇದುವರೆಗೂ ಸಾಕ್ಷರತೆಯ ಕೊರತೆಯ ನಾಡಿನಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆಯ ಕೊರತೆಗೆ ಕಾರಣ ಹುಡುಕಬಹುದಿತ್ತು, ಆದರೆ ವಿದ್ಯೆಯನ್ನು ಹೊಂದಿಯೂ ಪ್ರಜ್ಞೆಯಿಲ್ಲದ ಹಂದಿಗಳಂತೆ ವರ್ತಿಸುತ್ತಿರುವ ಜವಾಬ್ದಾರಿರಹಿತ ಈ ಯುವ ಶಕ್ತಿಯಿಂದ ಯಾವ ರೀತಿಯ ಪ್ರಜಾ ಪ್ರಭುತ್ವವನ್ನು ನಿರೀಕ್ಷಿಸಿ ಭಾವೀ ಭಾರತದ ಭವ್ಯತೆಯನ್ನು ಊಹಿಸಿಕೊಳ್ಳೋಣ..?
ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಅಗ್ನಿಪಥ ವಿರೋದಿಸಿ ರೈಲುಗಳಿಗೆ ಬೆಂಕಿ ಹಚ್ಚಿದಾಗ, ನಿಲ್ದಾಣದಲ್ಲಿ ಉಳಿದುಕೊಂಡಿದ್ದ ಕೆಲವು ಪ್ರಯಾಣಿಕರು ರೈಲು ಸುಟ್ಟು ಮತ್ತು ಹಾನಿಗೊಳಗಾದ ನಿಲ್ದಾಣದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ವಿಧ್ವಂಸಕತೆಯನ್ನು ಸಾವಿರಾರು ವಿಕಾರ ಮನಸುಗಳು ತಮ್ಮ ಮೊಬೈಲ್ ಕೆಮೆರಾದಲ್ಲಿ ಸೆರೆಹಿಡಿದವು.
ಇತರ ಯಾವುದೇ ಸುದ್ದಿ ಸಂಸ್ಥೆಗಳಿಗಿಂತ ವೇಗವಾಗಿ, ನಿಲ್ದಾಣದಲ್ಲಿರುವ ಪ್ರಯಾಣಿಕರು ತಮ್ಮ ಪರಿಚಿತ ಜನರಿಗೆ ನೇರ ದೃಶ್ಯಗಳನ್ನು ಪ್ರಸಾರ ಮಾಡುತ್ತಾರೆ. ಒಂದೆಡೆ ಹಿಂಸಾತ್ಮಕ ಚಟುವಟಿಕೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದರು.
ಇಂತಹ ಸುದ್ದಿಗಳಿಂದ ಮತ್ತು ದೃಶ್ಯಗಳಿಂದ ರೈಲಿಗಂಟಿದ ಅಗ್ನಿಗಿಂತಲೂ ಆಘಾತವನ್ನುಂಟು ಮಾಡುತ್ತಿರುವುದು ಈ ಯುವ ಪೀಳಿಗೆಗೆ ಇಲ್ಲದಿರುವ ಪ್ರಜ್ಞೆ, ಜವಬ್ದಾರಿ ಮತ್ತು ಸಾಮಾಜಿಕ ಕಾಳಜಿಗಳನ್ನು ನೆನೆದು.
ಇಂತಹ ಪೀಳಿಗೆಯಿಂದ ಪ್ರಜ್ಞಾವಂತರ ಪ್ರಜಾಪ್ರಭುತ್ವ ಮಾದರಿಯ ದೇಶದ ಆಳ್ವಿಕೆ ಸಾಧ್ಯನಾ?
ನನ್ನ ಆಸ್ತಿಯಂತೆಯೇ ದೇಶದ ಆಸ್ತಿಯೂ ನನ್ನದೇ, ಅದನ್ನು ರಕ್ಷಿಸಿಕೊಂಡು ಜೋಪಾನವಾಗಿ ಮುಂದಿನ ಜನತೆಗೆ ಪಾಸು ಮಾಡಬೇಕೆಂಬ ಪ್ರಜ್ಞೆಯಿಲ್ಲದ ಪ್ರಜೆಗಳಿಗೆ ಪ್ರಜಾಪ್ರಭುತ್ವ ಮಹತ್ವ ಅರ್ಥವಾದೀತ..
ಇದುವರೆಗೂ ಸಾಕ್ಷರತೆಯ ಕೊರತೆಯ ನಾಡಿನಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆಯ ಕೊರತೆಗೆ ಕಾರಣ ಹುಡುಕಬಹುದಿತ್ತು, ಆದರೆ ವಿದ್ಯೆಯನ್ನು ಹೊಂದಿಯೂ ಪ್ರಜ್ಞೆಯಿಲ್ಲದ ಹಂದಿಗಳಂತೆ ವರ್ತಿಸುತ್ತಿರುವ ಜವಾಬ್ದಾರಿರಹಿತ ಈ ಯುವ ಶಕ್ತಿಯಿಂದ ಯಾವ ರೀತಿಯ ಪ್ರಜಾ ಪ್ರಭುತ್ವವನ್ನು ನಿರೀಕ್ಷಿಸಿ ಭಾವೀ ಭಾರತದ ಭವ್ಯತೆಯನ್ನು ಊಹಿಸಿಕೊಳ್ಳೋಣ..?
ಏನು ಕಲಿಸುತ್ತಿದ್ದೇವೆ ನಾವು ನಮ್ಮ ಮಕ್ಕಳಿಗೆ,..? ನಮ್ಮ ವಿದ್ಯಾರ್ಥಿಗಳಿಗೆ..,? ನಮ್ಮ ನಾಗರಿಕರಿಗೆ,, ನಮ್ಮ ಸುತ್ತಲಿನವರಿಗೆ..?
What's Your Reaction?