ಯಶಸ್ಸಿನ ಶಿಖರವೇರುವಾಗ ನಾವು ದಾಟಲೇಬೇಕಾದ ಎರಡು ಮೆಟ್ಟಿಲುಗಳು

Jul 9, 2021 - 12:11
Jul 9, 2021 - 12:36
 0  86
ಯಶಸ್ಸಿನ ಶಿಖರವೇರುವಾಗ ನಾವು ದಾಟಲೇಬೇಕಾದ ಎರಡು ಮೆಟ್ಟಿಲುಗಳು

ಗೆಳೆಯರೆ,

ಯಶಸ್ಸಿನ ಶಿಖರವನ್ನೇರುವ  ದಾರಿ ಪ್ರತಿಯೊಬ್ಬರಿಗೂ ಒಂದೇಆ ದಾರಿಯಲ್ಲಿ ನಾವೆಲ್ಲರೂ ಕೆಲವು ಮೆಟ್ಟಿಲುಗಳನ್ನು ಖಂಡಿತವಾಗಿ ದಾಟಲೇಬೇಕು.

ಪ್ರತಿಯೊಬ್ಬ ಸಾಧಕನು ಹತ್ತಲೇಬೇಕಾದ ಮತ್ತು ದಾಟಲೇಬೇಕಾದ ಎರಡು ಮೆಟ್ಟಿಲುಗಳು ಯಾವುವು ಗೊತ್ತಾ

ಅಧೈರ್ಯ ಪಡಿಸುವನಮ್ಮಿಂದ ಸಾಧ್ಯವೇ..? ಎಂದು ಸಂದೇಹ ಮೂಡಿಸುವನಿನ್ನಿಂದ ಸಾಧ್ಯವಿಲ್ಲ ಹಾಸಿಗೆ ಇದ್ದಷ್ಟು ಕಾಲುಚಾಚು ಎಂದು ʼಮಿತಿ ಎಂಬ ಮಿಥ್ಯೆಯನ್ನು ನಮ್ಮ ಮುಂದೆ ಅಡ್ಡಗೋಡೆ ಕಟ್ಟುವ ಜನರುನಮ್ಮ ಸುತ್ತಲು ಒಂದು ಮೆಟ್ಟಿಲು ಆವರಿಸುತ್ತದೆನಾವು ಆ ಮೆಟ್ಟಿಲನ್ನು ದಾಟಲೇಬೇಕು.

ನಮ್ಮ ಮೇಲೆ ನಾವು ನಂಬಿಕೆಯಿಟ್ಟು ನಮ್ಮ ಗುರಿಯೆಡೆಗೆ ವಿಶ್ವಾಸದಿಂದ ಸಾಗಬೇಕು ಹಾಗೆ ಸಾಗಿಆ ಮೆಟ್ಟಿಲು ದಾಟಿದ ನಂತರ ನಮಗೆ ಮತ್ತೊಂದು ಮೆಟ್ಟಿಲು ಸಿಗಬಹುದು ಅದು ಸೋಲೆಂಬ ಮೆಟ್ಟಿಲುಆ ಮೆಟ್ಟಿಲನ್ನು ನಾವು ದಾಟಲೇಬೇಕು.

ಅಧೈರ್ಯ ಪಡಿಸಿದ ಜನರ ದಾಟಿ ಬಂದ ನೀವು , ಸೋಲಿನ ಪಟ್ಟಿಯಲ್ಲಿ ನಿಂತು ಕೈಚೆಲ್ಲಬಾರದುಸೋಲಿನ ಮೆಟ್ಟಲಿನಲ್ಲಿ ಕೂಡ ನಿಮ್ಮ ಆತ್ಮವಿಶ್ವಾಸನಂಬಿಕೆ ಮತ್ತು ನಿಮ್ಮ ಗಮ್ಯದ ಕಡೆಗಿರುವ ನಿಮ್ಮ ಶ್ರದ್ಧೆ ಕಿಂಚಿತ್ತೂ ಕಡಿಮೆಯಾಗಬಾರದುಬದಲಿಗೆ ಸೋಲು ಕಲಿಸಿದ ಪಾಠವು ನಿಮ್ಮ ಶಕ್ತಿಯಾಗಬೇಕು.ನಿನ್ನಿಂದಾಗದು ಬಿಟ್ಟುಬಿಡು ಎಂದು ನಿಮ್ಮನ್ನು ನಿರುತ್ಸಾಹಗೊಳಿಸಿದವರ ನಡೆ ನಿಮ್ಮಲ್ಲಿ ಹಠವನ್ನುಂಟು ಮಾಡಬೇಕು.

ಏಕೆಂದರೆ,

'ಡೇಲ್‌ ಕಾರ್ನೆಗಿʼ ಎಂಬ ಅಮೇರಿಕಾದ ಪ್ರಸಿದ್ಧ ಲೇಖಕಉಪನ್ಯಾಸಕ ಮತ್ತು personality development ಕೋರ್ಸುಗಳ ರಚನೆಗಾರ  ಈ ಎರಡು ಮೆಟ್ಟಿಲುಗಳ ಬಗೆಗೆ ಹೀಗೆಂದಿದ್ಧಾರೆ –“Discouragement and failure are two of the surest stepping stones to success’ ಅಂದರೆ ಧೈರ್ಯಗೆಡಿಸಿ ನಿಮ್ಮನ್ನು ನಿರುತ್ಸಾಹಗೊಳಿಸುವ ಜನರು ಮತ್ತು ನಿಮ್ಮ ಸೋಲು ಎರಡೂ ಕೂಡ ನಿಮ್ಮ ಯಶಸ್ಸಿನೆಡೆಗೆ  ಭದ್ರ ಮೆಟ್ಟಿಲುಗಳಾಗುತ್ತವೆ ಎಂದಿದ್ದಾರೆ.

 

         ನಿಜನೀವು ಯಶಸ್ಸಿನತ್ತ ಮುಖ ಮಾಡಿದ ಕೂಡಲೇನಿಮಗೆ  ಸಿಗುವುದು ನಿಮ್ಮನ್ನು ನಿರುತ್ಸಾಹಗೊಳಿಸುವ ಮಾತುಗಳುಮುನ್ನೆಚ್ಚರಿಕೆಯಂತೆ ಸಿಗುವ ಹಿಂಜರಿಕೆಯ ನುಡಿಗಳು, ನೀವು IAS ಮಾಡುತ್ತೇನೆ ಎನ್ನಿಗೆಳೆಯರಲ್ಲಿ ಅದಕ್ಕೆ ತುಂಬಾ ಓದಬೇಕು ಅನ್ನೋ ಅಪಸ್ವರಸಮಾಜದಲ್ಲಿ IAS ಮಾಡಿ ಏನ್ಮಾಡ್ತಿಯಾ ಮಂತ್ರಿ-ಕಂತ್ರಿಗಳ ಕಾಲ್ಬುಡದಲ್ಲಿ ಕೈ ಕಟ್ಟಿ ನಿಂತ್ಕೊ ಬೇಕಾಗುತ್ತೆ ಅನ್ನೋ ಅಸಹನೆಮನೆಯಲ್ಲಿ- ಅದಕ್ಕೆ ಅಷ್ಟೊಂದು ಹಣ ಎಲ್ಲಿಂದ ತರುವುದು ಅನ್ನೋ ಅಸಹಾಯಕತೆ.

ನೀವು FDA/SDA ಪರೀಕ್ಷೆ ಬರೆದು ಸರ್ಕಾರಿ ಕೆಲಸಕ್ಕೆ ಸೇರ್ತೀನಿ ಅಂದು ನೋಡಿಗೆಳೆಯರು ಪ್ರಶ್ನೆಪತ್ರಿಕೆ ಸಿಗುತ್ತೆ ನೋಡೋಣ ಅಂತಾರೆಕೆಲವರು ಎಷ್ಟೊಂದು ಜನ ಪರೀಕ್ಷೆ ಬರಿತಾರೆ ಅಂದು ನಿರಾಸಕ್ತಿ ಮೂಡಿಸುತ್ತಾರೆ, ಮತ್ತು ಲಂಚಕೊಟ್ಟರಷ್ಟೆ ಕೆಲಸ ಅನ್ನೋ ನಿರಾಶೆ,, ಮತ್ತೆ ಹಲವರು ಅದಕ್ಕೆಲ್ಲಾ ತುಂಬಾ ಓದಬೇಕು ಆಗಲ್ಲ ಕಷ್ಟ ಅಂದರೆಮಗದಷ್ಟು ಜನ ಹಳೆಯ ಒಂದಷ್ಟು ಪ್ರಶ್ನೆಪತ್ರಿಕೆ ಸಾಲ್ವ್‌ ಮಾಡಿಬಿಟ್ರೆ ಸಾಕು ಮತ್ತು ಮಹನೀಯರು YouTube video ನೋಡಿದ್ರೆ ಸಾಕು , ಪರೀಕ್ಷೆ ಪಾಸಾಗಿ ಕೆಲಸ ಸಿಕ್ಕಿದ ಹಾಗೇನೆ…. ಹೀಗೆ  ಪರೋಕ್ಷವಾಗಿ – ಪ್ರತ್ಯಕ್ಷವಾಗಿ ನಿಮ್ಮ ಯಸಸ್ಸಿನೆಡೆಗಿನ ನಿಮ್ಮ ಗಮನವನ್ನು ನಿರ್ನಾಮ ಮಾಡಿಬಿಡುತ್ತಾರೆ. 

     ಇವರು ತುಂಬುವ ಈ ಹಿಂಜರಿಕೆಯನ್ನುಹುಟ್ಟಿಸುವ Shortcut ಗಳನ್ನು ವ್ಯವಸ್ಥೆಯ ಲೋಪಗಳಲ್ಲಿ ಇಣುಕುವ ಅಪನಂಬಿಕೆಗಳನ್ನು ಮೀರಿ ಈ ಮೆಟ್ಟಿಲನ್ನು ನೀವು ದಾಟಲೇಬೇಕು.

ಅದು  IAS ಇರಲಿ , FDA/SDA/Banking ಹೀಗೆ ಯಾವುದೇ ಇರಲಿಇಲ್ಲಿ ನಿಮ್ಮ ಸಾಧನೆಯ  ಹಾದಿ ಕ್ರೀಡೆಯಲ್ಲಿರಲಿ-ಕೃಷಿಯಲ್ಲಿರಲಿಯಾವುದೇ ಕ್ಷೇತ್ರದಲ್ಲಿರಲಿನೀವು ಸಾಧನೆಯ – ಯಶಸ್ಸಿನ ಹಾದಿ ಹಿಡಿದಾಗ ನಿಮಗೆ ಸಿಗುವ ಮೊದಲ  ಮೆಟ್ಟಿಲು – ಹಿಂಜರಿಕೆ ಮೂಡಿಸಿನಿಮ್ಮ ಸಾಧನೆಯ ಕನಸನ್ನು ಮೂದಲಿಸುವನಿಮ್ಮ ಶಕ್ತಿಯ ಮೇಲೆ ನಿಮಗೆ ಅಪನಂಬಿಕೆ ಮೂಡಿಸುವ , ನಮ್ಮ ಸಮಾಜದ ಅಂಕು-ಡೊಂಕುಗಳ ಕುರಿತು ನಮ್ಮಲ್ಲಿ ಅಸಹಾಯಕತೆ ಮೂಡಿಸುವ ಜನರೇ ತುಂಬಿರುವವರದು  ನೀವು ಇದನ್ನು  ದಾಟಲೇಬೇಕು.

ಇದನ್ನು ದಾಟಬೇಕೆಂದರೆ ನೀವು ಒಂದು ಮುಖ್ಯವಾದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು – ಅದೇನೆಂದರೆಪ್ರಪಂಚದಲ್ಲಿ ಈವರೆಗೂ ಸಾಧನೆ ಮಾಡಿ ಯಶಸ್ಸಿನ ಉತ್ತುಂಗವೇರಿದವರಲ್ಲಿ ಶೇ. 99 ರಷ್ಟು ಜನ ನಮ್ಮ-ನಿಮ್ಮಂತಹ ಜನಸಾಮಾನ್ಯರೆಸೌಲಭ್ಯಗಳ ಕೊರತೆಯಿದ್ದವರೆಸಂಪನ್ಮೂಲಗಳ ಅಭಾವವಿದ್ದವರೆ. 

       ಒಮ್ಮೆ ಅವಲೋಕಿಸಿ ನೋಡಿ , ನಮ್ಮೊಂದಿಗಿರುವ ಇನ್ಫೋಸಿಸ್‌ ನಾರಾಯಣ ಮೂರ್ತಿ, ಪ್ರಪಂಚದ ಶ್ರೀಮಂತರ ಸಾಲಿನಲ್ಲಿ  ಮೊಟ್ಟಮೊದಲಿಗೆ ನಿಂತ ಬಿಲ್ಗೇಟ್ಸ್ಪ್ರಸಿದ್ಧ Facebook ಸಂಸ್ಥಾಪಕ.. ಹಾಗೆ ಯಾವುದೇ ಕ್ಷೇತ್ರದ ಸಾಧಕನ ಬಗೆಗೆ ಅರಿತುನೋಡಿ, ಇಂದು ಇಡೀ ಜಗತ್ತನ್ನೇ ಮರಳು ಮಾಡಿರುವ Apple ಮೊಬೈಲ್ಗಳ ಸಂಸ್ಥೆಯ ಸಂಸ್ಥಾಪಕ ಸ್ಟೀವ್‌ ಜಾಬ್ನ ಬಾಲ್ಯವನ್ನೊಮ್ಮೆ ಕೆದಕಿ ನೋಡಿಅವನ ಸಾಧನೆಯ ಸಂಘರ್ಷಗಳನ್ನು ಸವಿದು ನೋಡಿ,… They all grown up from ground root.

ಬಡವರಾಗಿಮಧ್ಯಮವರ್ಗದವರಾಗಿಅಲ್ಪ ಸವಲತ್ತುಗಳನ್ನು ಹೊಂದಿದವರಾಗಿವಿರಳ ಸಂಪನ್ಮೂಲಗಳನ್ನು ಹೊಂದಿದವರಿಂದಲೇ ಸಾಧಿಸುವ ಯೋಗ್ಯತೆ ಇದೆYes, ಅದೇ ನಮ್ಮ ಯೋಗ್ಯತೆ , ನಮ್ಮ ಗಮ್ಯಛಲಆತ್ಮಬಲಗಳೇ  ನಮ್ಮ ಯೋಗ್ಯತೆದಾಟಿ ಬನ್ನಿ ಆ ಮೆಟ್ಟಿಲನ್ನು. 

       ಸೋಲಿಗೆ ಅಂಜುವ ಅಗತ್ಯವಿಲ್ಲಸೋಲೆನ್ನುವುದು ಸಾಧನೆಯ ಶಿಖರವನ್ನೇರಲು ನಮಗೆ ನೀಡುವ ಅನುಭವ-ಅವಲೋಖನಗಳ ಪಾಠವಷ್ಟೆ. ಆ ಪಾಠ ಅಭೂತಪೂರ್ವ ಅನುಭವದೊಂದಿಗೆ ಯಶಸ್ಸಿನ ಶಿಖರವನ್ನೇರುವ ಅವಕಾಶವನ್ನು ನೀಡುತ್ತದೆಸೋಲು ನಮ್ಮ ಸಾಧನೆಯನ್ನು  ಮತ್ತಷ್ಟು ಪರಿಪಕ್ವಗೊಳಿಸುತ್ತದೆ.

ಹಾಗಾದರೆಸೋಲನ್ನು ಹೇಗೆ ನೋಡಬೇಕುಸೋಲಿನಿಂದ ಏನೂ ಕಲಿಯಬೇಕುಸೋಲಿನ ಸವಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು….?

ʼಸೋಲುʼ ಎನ್ನುವುದು ನಮ್ಮ ಮತ್ತೊಂದು ಅವಕಾಶದ ಜೊತೆಗೆ ಮತ್ತಷ್ಟು ಅನುಭವವನ್ನು ನೀಡುತ್ತದೆ.

ಸೋತಿದ್ದೇಕೆಮತ್ತು ಸೋತಿದ್ದೇಲ್ಲಿ…? ಎಂಬ ಕಾರಣಗಳನ್ನು ಅವಲೋಕಿಸಿದಾಗ ನಮಗೆ ಗೆಲುವಿಗೆ ಅನೇಕ ಆಯಾಮಗಳು ಮತ್ತು ದಾರಿಗಳು ದೊರೆಯುತ್ತವೆಹಾಗೆ ನಾವು ಸೋಲನ್ನು ಸೋಪಾನ ಮಾಡಿಕೊಳ್ಳಬೇಕುಹಾಗೆ ಅದನ್ನು ಮೆಟ್ಟಿಲು ಮಾಡಿಕೊಳ್ಳಬೇಕು.

ಸೋತೆನೆಂದು ಎದೆಗುಂದಬಾರದುಅವಮಾನ ಪಟ್ಟುಕೊಳ್ಳಬಾರದುಸೋಲಿನೊಂದಿಗೆ ಎಕ್ಸ್ಟ್ರಾ ಅನುಭವ ಪಡೆದನೆಂದು ಹಿಗ್ಗಬೇಕುಆದರೆ ಆ ಸೋಲಿನ ನಂತರದ ನಿಮ್ಮ ಪ್ರಯತ್ನವು ಸರ್ವ ಸಿದ್ಧವಾಗಿಮಾಡಿದ  ತಪ್ಪುಗಳನ್ನು ಮನಗಂಡು ಅವಲೋಕಿಸಿ , ಸರಿಯಾದ ಗುರಿಯೆಡೆಗೆ ನೂರಕ್ಕೆ ನೂರು ಸರಿಯಾದ ಪ್ರಯತ್ನವಾಗಿರಬೇಕು ಮತ್ತೊಂದು ಸೋಲು ಎದುರಾದರೆ…?

   ಪ್ರಿಯ ಗೆಳೆಯರೆಮೊಟ್ಟಮೊದಲಿಗೆ ಮೌಂಟ್‌ ಎವರೆಸ್ಟ್‌ ಪರ್ವತವೇರಿದವರಲ್ಲಿ ಒಬ್ಬರಾದ “ತೆನ್ಜಿಂಗ್‌ ನಾರ್ಗೆʼ ಕೂಡ ಆ ಪರ್ವತವನ್ನು ಏರಿ ಮೊಟ್ಟ ಮೊದಲಿಗ ಎನಿಸಿಕೊಳ್ಳುವ ಮೊದಲು ಆರು ಬಾರಿ ಸೋತಿದ್ದಒಮ್ಮೆ ಪ್ರಪಾತಕ್ಕೆ ಕುಸಿದು ಜೀವನ – ಮರಣದ ರುಚಿ ನೋಡಿ ಬಂದಿದ್ದರುಆದರೆ ಆ ಸೋಲಿನ ಪ್ರಪಾತಗಳ್ಯಾವುವು ಅವನ ಯಶಸ್ಸಿನ ಶಿಖರದ ಆಸೆಯನ್ನು ಹಳ್ಳಕ್ಕೆ ನೂಕಲಿಲ್ಲ.

So,

“Shallow men believe in luck, strong men believe in cause and effects” ಎಂಬ ಮಾತೊಂದಿದೆನೀವು ಸಾಧನೆಗೆ ಶಕ್ತರಾಗಿದ್ದರೆ ಸೋಲುಗಳು ಎಷ್ಟೇ ಬರಲಿ ಕಾರಣ ಹುಡುಕಿಆ ಕಾರಣಗಳನ್ನು ಒಂದೊಂದಾಗಿ ಸದೆ ಬಡಿದು , ಸೋಲಿನ ಮೆಟ್ಟಿಲು ಏರಿ ಬನ್ನಿ.


ನೆನಪಿಡಿ

ಯಶಸ್ಸು ಕೇವಲ ಬಯಸುವುದಲ್ಲ

                        ಬದುಕುವುದು

ಸಾಧನೆ ಕೇವಲ ಸಾರುವುದಲ್ಲ

                        ಶ್ರಮಿಸುವುದು

ಸೋಲು ಕೇವಲ ಹಿಂಬಡ್ತಿಯಲ್ಲ

                        ಹೆಗ್ಗಳಿಕೆ

ಸಾಧನೆಯೆಡೆಗೆ ಗುರಿ ನೆಟ್ಟವನು

ಕೇವಲ ಸಾಮಾನ್ಯನಲ್ಲ ಅವನು

ಸಾಮಾನ್ಯರಲ್ಲಿ - ಅಸಾಮಾನ್ಯ

                                                                                        ದೀಪುಕೆಎಂಗೌಡ  

What's Your Reaction?

like

dislike

love

funny

angry

sad

wow