ಪ್ರೀತಿ

Jun 5, 2021 - 18:46
Jun 5, 2021 - 19:03
 0  52
ಪ್ರೀತಿ

ಪ್ರೀತಿ....

ಪ್ರೀತಿ, ಒಂದು ಸ್ವತ್ತಲ್ಲ,

ಸ್ವಾರ್ಥವಲ್ಲ, ಸಾಧನೆಯಲ್ಲ

ಕೇವಲ ವಾಸನೆಯಲ್ಲ,

ಪ್ರೀತಿ ಎಂದರೆ ನಿರಂತರ ಶ್ರದ್ಧೆ

ದೂರವೇ ಉಳಿದು ನಿನ್ನ ನಗುವಲಿ

ಸುಖಿಸುವ ಭಾವ.

 

ಪ್ರೀತಿ ಎಂದಿಗೂ ಬೇರೆ ಮಾಡುವುದಿಲ್ಲ

ಬದಲಿಗೆ ತಾನೇ ಬೇರೆಯಾಗುತ್ತದೆ

ತಂದೆ-ತಾಯಿ, ಬಂಧು-ಬಳಗ

ಸಹೋದರ-ಸಹೋದರಿ ಎಂಬ ಸಕಲ

ಸಂಬಂಧಗಳಲಿ  ನಿನ್ನ ಸಿಂಗರಿಸಿ

ಸಡಗರಿಸುವ ಸುಂದರ ಭಾವ.

 

ಪ್ರೀತಿ-ಪ್ರೇತವಲ್ಲ, ನಿನ್ನ ಮನಸನೆಂದೂ

ಸುಡುವುದಿಲ್ಲ, ನಿನ್ನ ಬಾಂಧವ್ಯಗಳನ್ನು

ಕಸಿಯುವುದಿಲ್ಲ, ನಿನ್ನ ಅಸ್ತಿತ್ವಕ್ಕೆ

ಉಸಿಕಟ್ಟಿಸಿ ಸಾಯುಸುವುದಿಲ್ಲ,

ತನ್ನ ತ್ಯಾಗದ ನೀರೆರೆದು

ನೀ ನಳನಳಿಸುವುದನ್ನು ನೋಡಿ

ದೂರದಿಂದಲೇ ನಗುತ್ತದೆ.

                                -ವಾಸುದೇವತನಯ

What's Your Reaction?

like

dislike

love

funny

angry

sad

wow