ಧ್ಯಾನ ದೈವಿಕವಷ್ಟೇ ಅಲ್ಲ, ವೈಜ್ಞಾನಿಕವೂ ಹೌದು

Jun 14, 2021 - 15:08
Aug 6, 2021 - 19:11
 1  190
ಧ್ಯಾನ ದೈವಿಕವಷ್ಟೇ ಅಲ್ಲ, ವೈಜ್ಞಾನಿಕವೂ ಹೌದು

ಹೌದು, ಧ್ಯಾನವು ಕೇವಲ ದೇವರ ನೆನೆಯಲಿಕ್ಕಷ್ಟೇ ಅಲ್ಲ, ಅದು ಕೇವಲ ದೈವವನ್ನು ನಂಬುವವರಿಗಷ್ಟೇ ಅಲ್ಲ, ಅದು ಯಾರು ಬೇಕಾದರೂ ಅಂದರೆ, ದೈವಿಕದಲ್ಲಿ ನಂಬಿಕೆ ಇಟ್ಟವರು/ಇಡದವರೂ ಕೂಡ ಪ್ರಯೋಜನ ಹೊಂದಬಹುದಾದ ಕ್ರಿಯೆ ಎಂದು ನಂಬುವುದಕ್ಕೆ ವೈಜ್ಞಾನಿಕ ತಳಹದಿಯೂ ಇದೆ.

“ಎಂಟು ವರ್ಷದ ಪ್ರಾಯದಲ್ಲೇ ಮಕ್ಕಳಿಗೆ ಧ್ಯಾನ ಮಾಡುವುದನ್ನು ಕಲಿಸುವುದರಿಂದ ಜಗತ್ತಿನಲ್ಲಿ ನಡೆಯುವ ಹಿಂಸಾತ್ಮಕ ಕೃತ್ಯಗಳನ್ನು ತೊಡೆದು ಹಾಕಬಹುದು” ಎಂದು ದಲೈ ಲಾಮ ಹೇಳಿದ್ದಾರೆ. ಈ ಹೇಳಿಕೆಯು ಕೇವಲ ಆಧ್ಯಾತ್ಮಕ ತಳಹದಿಯನ್ನು ಹೊಂದಿಲ್ಲ, ಇದು ವಿಜ್ಞಾನದ ಆಧಾರವನ್ನು ಸಹ ಹೊಂದಿದೆ.

ವಿಜ್ಞಾನದ ಆಧಾರವೇನು?

ನಮ್ಮ ಮೆದುಳಿನಲ್ಲಿ ಬೀಟಾ ತರಂಗಗಳಿರುತ್ತವೆ, ಇವು ಪ್ರಜ್ಞೆ, ಚಿಂತನೆ, ತಾರ್ಕಿಕ ಅಥವಾ ಜ್ಞಾಪಕದಂತಹ ಬೌದ್ಧಿಕ ಕ್ರಿಯೆ (cognitive) ಗಳನ್ನು ಮಾಡುವಾಗ ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಈ ತರಂಗಗಳು ಧ್ಯಾನ ಮಾಡುವಾಗ ತಮ್ಮ ಕ್ರಿಯಾ ಚಟುವಟಿಕೆಗಳನ್ನು ನಿಲ್ಲಿಸುತ್ತವೆ. ಹಾಗಾಗಿ ಧ್ಯಾನದ ಸಮಯದಲ್ಲಿ ಬೀಟಾ ತರಂಗಗಳ ಅಬ್ಬರ ಕಡಿಮೆಯಾಗುತ್ತದೆ. ಈ ವ್ಯತ್ಯಾಸವನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.

ನಮ್ಮ ಮೆದುಳಿನ ಕಿರು ಪರಿಚಯವನ್ನು ಈ ಲೇಖನದ ಅಗತ್ಯಕ್ಕೆ ತಕ್ಕಷ್ಟು ಅರಿಯೋಣ

Frontal lobe : 

ಇದು ಮೆದುಳಿನ ಅತ್ಯಂತ ವಿಕಸನಗೊಂಡ ಭಾಗ, ಇದು ನಮ್ಮ ಯೋಜನೆ, ಸ್ವಪ್ರಜ್ಞೆ ಭಾವನೆಗಳು, ತರ್ಕಗಳು ಮುಂತಾದ ಮುಖ್ಯ ಕ್ರಿಯೆಗಳಿಗೆ ಕಾರಣವಾಗಿರುತ್ತವೆ. ʼಇದು ಧ್ಯಾನದ ಸಮಯದಲ್ಲಿ ತನ್ನ ಕಾರ್ಯವನ್ನು ನಿಲ್ಲಿಸುತ್ತದೆ.”

The Partial lobe : 

ಇದು ನಮ್ಮ ಮೆದುಳಿನಲ್ಲಿ ನಮ್ಮ ಸುತ್ತಲಿನ ಮಾಹಿತಿಗಳನ್ನು ಪ್ರೋಸೆಸ್‌ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ.

ಧ್ಯಾನದ ಸಮಯದಲ್ಲಿ ಇದು ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ.

The Thalamus : 

ಇದನ್ನು ನಮ್ಮ ಮೆದುಳಿನಲ್ಲಿ ಹುದುಗಿರುವ ಅಸಂಖ್ಯಾತ ಮಾಹಿತಿಗಳ ಖಜಾನೆಯ ಕಾವಲುಗಾರ ಎನ್ನಬಹುದು. ನಮ್ಮ ಏಕಾಗ್ರತೆಗೂ ಕೂಡ ಇದೇ ಕಾರಣ. ಧ್ಯಾನದ ಸಮಯದಲ್ಲಿ ಇದರ ಚಟುವಟಿಕೆಯು ಕಡಿಮೆಯಾಗುತ್ತದೆ, ಅಂದರೆ ಧ್ಯಾನದ ಸಮಯದಲ್ಲಿ ಇದು ಮಾಹಿತಿಗಳನ್ನು ಪಡೆಯುವುದನ್ನು ಕಡಿಮೆಗೊಳಿಸುತ್ತದೆ.

Reticular Formation : 

ಇದು ಒಟ್ಟಾರೆ ಮೆದುಳಿನ ಸಂರಕ್ಷಕ. ಇದು ಮೆದುಳಿಗೆ ಮಾಹಿತಿಗಳನ್ನು ಸ್ವೀಕರಿಸುವ ಭಾಗ. ಮೆದುಳಿಗೆ ನಿರ್ದಿಷ್ಟ ಎಚ್ಚರಿಕೆ ಸಂಜ್ಞೆಗಳನ್ನು ರವಾನಿಸುವ ಪ್ರತಿಕ್ರಯಿಸುವ ಕಾರ್ಯವನ್ನು ಮಾಡುತ್ತದೆ. ಧ್ಯಾನವು ಈ ಭಾಗವನ್ನು ಪ್ರತಿಕ್ರಯಿಸಿದ ತಕ್ಷಣ ಸಂಜ್ಞೆ/ಕ್ರಿಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಧ್ಯಾನದಿಂದ ಮೆದುಳಿನ ಮೇಲಾಗುವ ಈ ಎಲ್ಲಾ ಪರಿಣಾಮಗಳ ಮೂಲಕ,

  • ನಮ್ಮೊಳಗಿನ ಅವಲೋಕನಕ್ಕೆ, ನಮ್ಮ ಶಕ್ತಿ-ಸಾಮರ್ಥ್ಯಗಳನ್ನು ಕಾಣುವ ಸಾಧ್ಯತೆ, ನಮ್ಮ ದೇಹದ ಅಗತ್ಯಗಳಿಗೆ ಮತ್ತು ಮನಸ್ಸಿನ ಭಾವಗಳಿಗೆ ಬೇಕಾದ ಅಗತ್ಯತೆಗಳು ಮತ್ತು ಪರಿಣಾಮಗಳನ್ನು ಕಂಡುಕೊಳ್ಳುಲು ನಮ್ಮನ್ನು ಶಕ್ತಗೊಳಿಸುತ್ತದೆ.
  • ನಮ್ಮ ಅವ್ಯಕ್ತ ಭಯ (Anxiety) , ಸ್ಟ್ರೆಸ್‌ಗಳನ್ನು ಕಡಿಮೆ ಮಾಡುತ್ತದೆ. ಧ್ಯಾನದ ಮೂಲಕ ಈ ಎರಡು ಶತೃಗಳನ್ನು ನಾವು ಗೆಲ್ಲಬಹುದು. ಸ್ಟ್ರೆಸ್‌ ಕಡಿಮೆಯಾಗಿ ‘anxiety’ ಯ ಕಾರಣಗಳಿಗೆ ಪರಿಹಾರಗಳನ್ನು ನಮಗೆ ನಾವೇ ಕಂಡುಕೊಳ್ಳಲು ಧ್ಯಾನವು ಸಹಾಯ ಮಾಡುತ್ತದೆ. ಧ್ಯಾನದಿಂದಾಗಿ ನಮ್ಮ ಮನಸ್ಸಿನಲ್ಲಿನ ಗೊಂದಲಗಳು ಮರೆಯಾಗಿ ಯಾವುದೇ ವಿಷಯವನ್ನು ಕಾನ್ಫಿಡೆಂಟ್‌ ಆಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
  • ಧ್ಯಾನದಿಂದ, ನಮ್ಮ ಭಾವನಾತ್ಮಕತೆ ಉತ್ತಮಗೊಂದು ಅನಗತ್ಯ ಭಾವನೆಗಳಿಗೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತದೆ.
  • ಧ್ಯಾನದಿಂದ, ನಮ್ಮ ಜ್ಞಾಪಕ ಶಕ್ತಿಯು ಉತ್ತಮಗೊಳ್ಳುತ್ತದೆ.
  • ಧ್ಯಾನವು ನಮ್ಮನ್ನು ದಯಾಳುವನ್ನಾಗಿ ಮಾಡುತ್ತದೆ, ಇದರಿಂದ ನಮಗಿನ್ನ ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಬಹುದಾದ ಯೋಗ್ಯತೆಯನ್ನು ನಮಗೆ ಕಲ್ಪಿಸುತ್ತದೆ.
  • ಧ್ಯಾನದಿಂದ, ನಾವು ಹೆಚ್ಚು ಕ್ರಿಯಾತ್ಮಕ ಮತ್ತು ಸೃಜನಶೀಲರಾಗುತ್ತೇವೆ.


ಇಷ್ಟೆಲ್ಲಾ ಪ್ರಯೋಜನಗಳನ್ನು ನೀವು ಪಡೆಯಬೇಕಿದ್ದರೆ ನೀವು ಧ್ಯಾನವನ್ನು ಆಗೊಮ್ಮೆ-ಈಗೊಮ್ಮೆ ಮಾಡಿದರೆ ಸಾಧ್ಯವಾಗುವುದಿಲ್ಲ, ಇದನ್ನು ನೀವು ಪ್ರತಿದಿನವೂ ಮಾಡಬೇಕು, ಕನಿಷ್ಟ 15 ನಿಮಿಷ ಮಾಡಿದರೂ ಸಾಕು. ಪ್ರಾರಂಭದಲ್ಲಿ ನಿಮಗೆ ಅಸಾಧ್ಯವೆನಿಸಬಹುದು, ದೇಹ ʼಸಾಥ್‌ʼ ಕೊಡದೆ ಇರಬಹುದು, ಮನಸ್ಸು ಏಕಾಗ್ರತೆ ಸಾಧಿಸಲು ಹೆಣಗಾಡಬಹುದು, Believe me, ಹಠಬಿಡದೆ ಮಾಡಿ ನೋಡಿ, ಪ್ರತಿ ಧ್ಯಾನದ ನಂತರ ನೀವು ನಿಮ್ಮ ಆತ್ಮಕ್ಕೆ / ಮನಸ್ಸಿಗೆ ಒಂದು ಶುಭ್ರ-ಸ್ನಾನ ಮಾಡಿಸಿದಷ್ಟು ಆಹ್ಲಾದವೆನ್ನಿಸುತ್ತದೆ. That feeling is pleasant

ಈ ಧ್ಯಾನವನ್ನು ಸಾಧಿಸಲಿಕ್ಕೆ ನೀವು ಧ್ಯಾನದ ಕ್ಲಾಸಿಗೆ ಸೇರಬೇಕೆಂದಿಲ್ಲ, ಮನೆಯಿಂದ ಬೇರೆಕಡೆ ಹೋಗಿ ಮಾಡಬೇಕೆಂದಿಲ್ಲ, ನಿಮ್ಮ ಅನುಕೂಲಗಳಿಗೆ ತಕ್ಕಂತೆ ಬೆಳಗ್ಗೆ ಎದ್ದ ತಕ್ಷಣ 15 ನಿಮಿಷ ಅಥವಾ ಕೆಲಸಗಳು ಮುಗಿದ ನಂತರ ಮಧ್ಯಾಹ್ನ 15 ನಿಮಿಷ ಅಥವಾ ಶಾಲೆಯಿಂದ / ಆಫೀಸಿನಿಂದ ಬಂದ ಮೇಲೆ 15 ನಿಮಿಷಹೀಗೆ ನಿಮ್ಮ ಸಮಯ ಸಂದರ್ಭಗಳಿಗೆ ತಕ್ಕಂತೆ ಮಾಡಬಹುದು.

 

ಧ್ಯಾನ ಮಾಡುವ ಕ್ರಮ….

ನಾನು ಸದ್ಗುರುರವರ ʼಈಶʼ ಕ್ರಿಯಾ ಎಂಬ ವಿಡಿಯೋವನ್ನು ಅನುಸರಿಸಿ ಧ್ಯಾನ ಮಾಡುತ್ತೇನೆ. ನೀವು ಹಾಗೆಯೇ ಮಾಡಬೇಕೆಂದು ನಾನೇನು ಒತ್ತಾಯಿಸುತ್ತಿಲ್ಲ, ಧ್ಯಾನದ ಪ್ರಪಂಚಕ್ಕೆ ಹೊಸದಾಗಿ ಹೋಗುವವರಿಗೆ ಅದು ಅತ್ಯುತ್ತಮವಾಗಿದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ.
ಮೊಬೈಲ್‌-ಇಯರ್‌ ಫೋನ್‌ ಬಳಸಿ ಪ್ರಾರಂಭಿಸಿ, ಅದ್ಭುತ ಅನುಭವ.


ಶುಭವಾಗಲಿ, ನಿಮ್ಮ ಧ್ಯಾನದ ಪಯಣವು ನಿಮ್ಮನ್ನು ಜ್ಞಾನಿಯನ್ನಾಗಿ ಮಾಡಲಿ, ನಿಮ್ಮ ಮನಸ್ಸನ್ನು ಶಾಂತಗೊಳಿಸಿ ನಿಮ್ಮ ಗೊಂದಲಗಳನ್ನೆಲ್ಲಾ ಗೆಲ್ಲುವಂತೆ ಮಾಡಿ ನಿಮ್ಮನ್ನು ದಯಾಳುವಾಗಿಸಲಿ.

                                                                                                                              -ವಾಸುದೇವತನಯ

 

 

 

 

What's Your Reaction?

like

dislike

love

funny

angry

sad

wow