370 ನೇ ಅರ್ಟಿಕಲ್ ನಿರ್ಮೂಲನೆ ಮೂವತ್ತು ವರ್ಷ ಮುಚ್ಚಿಟ್ಟ ಮತಿ ಹೀನರ ಕುಕೃತ್ಯ ತೆರೆದುಕೊಳ್ಳಲು ಹೇಗೆ ಸಾಧ್ಯವಾಯಿತು?
ಪ್ರಿಯ ಸ್ನೇಹಿತರೆ,
ಈ ಲೇಖನವನ್ನು 370 ನೇ ಅರ್ಟಿಕಲ್ ನಿರ್ಮೂಲನೆ ಮಾಡಿದ ಸಂದರ್ಭದಲ್ಲಿ ಸ್ವಾಧ್ ಜ್ಞಾನ ಸುಧಾ ಇಯರ್ ಬುಕ್ ಗಾಗಿ ಬರೆದಿದ್ದು. ಈಗ ಈ ಮಾಹಿತಿಗಳು ಅತ್ಯಂತ ಪ್ರಸ್ತುತ ಎಂದೆನಿಸಿದ್ದರಿಂದ ಈ ಲೇಖನವನ್ನು ಯಾವುದೇ ಮಾರ್ಪಾಡಿಲ್ಲದೆ ಪ್ರತಿಬಿಂಬದಲ್ಲಿ ಪ್ರಕಟಿಸುತ್ತಿದ್ದೇನೆ ಮುಂದೆ ಈ ಅರ್ಟಿಕಲ್ ತೆಗೆದ ನಂತರದ ಬೆಳವಣಿಗೆ, ಅಭಿವೃದ್ದಿ , ಸ್ವಾತ್ರಾಂತ್ಯ, ಪರಿಸ್ಥಿತಿ ಮುಂತಾದವುಗಳ ಬಗೆಗೆ ಒಂದು ಸಂಶೋಧನಾ ಲೇಖನವನ್ನು ನಿಮಗೆ ನೀಡಲಿದ್ದೇನೆ. ಅರಿಯದೆ ಮಾತನಾಡುವುದಕ್ಕಿಂತ ಅರಿತು ಮಾತನಾಡುವುದು ಮತ್ತು ಬೇರೊಬ್ಬರಿಗೆ ಅಂಕಿ-ಅಂಶಗಳೊಂದಿಗೆ ತರ್ಕಿಸುವುದು ಅತ್ಯಂತ ಸಮಂಜಸ ಶುಭವಾಗಲಿ ಅರಿವಿನ ಸಮಾಜ ಕಟ್ಟೋಣ ಅರಿತು ಬೆಳೆಯೋಣ – ಲೇಖಕ
ಭಾರತ ಸಂವಿಧಾನದ ಆರ್ಟಿಕಲ್ 370 ಕ್ಕೆ ನಮ್ಮ ಭಾರತ ಸರ್ಕಾರ ತಿಲಾಂಜಲಿ ನೀಡಿದ್ದು ನಮ್ಮೆಲ್ಲರ ಮನಸ್ಸಿಗೆ ಮತ್ತು ಹೃದಯಕ್ಕೆ ತೀರದ ಆನಂದವನ್ನುಂಟು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಷಾ ರವರು ಭಾರತೀಯರೆಲ್ಲರ ದೇಶಾಭಿಮಾನದ ದುಃಖ ನಿವಾರಿಸಿ ನಮ್ಮೆಲ್ಲರ ಮನಸ್ಸಿನಲ್ಲಿ ಎಂದಿಗೂ ಮಾಸದ ಹೀರೋಗಳಾಗಿ ಬಿಟ್ಟರು ಎಂದರೆ, ಅತಿಶಯೋಕ್ತಿಯಲ್ಲ.
ಕಾನೂನು ಕಲಿತಿರುವ ನನಗೆ ನನ್ನ ಕಾಲೇಜಿನ ದಿನಗಳಲ್ಲಿ ನಮ್ಮ ಸಂವಿಧಾನ ಮತ್ತು ಕಾನೂನುಗಳಲ್ಲಿ ಕೊಂಕು ಮೂಡಿ ಸದಾ ಕಾಡುತ್ತಿದ್ದ ಕೊರಗು ಈಗ ಮಾಯವಾಗಿದೆ.
ಹೌದು, ಈಗ ನನ್ನ ಸಂವಿಧಾನ ಪರಿಪೂರ್ಣವಾಗಿದೆ. ಸರ್ವರಿಗೂ ಸಮಾನವಾಗಿದೆ ಮತ್ತು ಅತ್ಯಂತ ಶ್ರೇಷ್ಠವಾಗಿದೆ ಎಂದು ಒಂದೇ ಮನಸಿನಿಂದ ಒಪ್ಪಿಕೊಳ್ಳಲು ಸಾಧ್ಯವಾಗಿದೆ. ಕಾಲೇಜು ದಿನಗಳಲ್ಲಿ ಸಂವಿಧಾನ ಅಥವಾ ಇತರೆ ಕಾನೂನು ವಿಷಯಗಳನ್ನು ಕಲಿಯುವಾಗ ಉಂಟಾಗುತ್ತಿದ್ದ ಅಸಮ್ಮತ ಭಾವಗಳಿಗೆ ಈಗ ಸಮ್ಮತ ಸಿಕ್ಕಿದೆ. ವಿದ್ಯಾರ್ಥಿಗಳು ಕೇಳುತ್ತಿದ್ದ 370 ಕುರಿತ ತಾರತಮ್ಯದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ ಕಳ್ಳ ಮನಸ್ಸಿನಿಂದ ಸಮಾಧಾನ ಪಡಿಸುತ್ತಿದ್ದ ಉಪನ್ಯಾಸಕರುಗಳಿಗೆ ಎದೆಯುಬ್ಬಿಸಿ ನಮ್ಮ ಕಾನೂನುಗಳನ್ನು ಕಲಿಸಬಹುದಾಗಿದೆ.
Yes, we got complete constitution now, for all Indian citizens.
ಭಾರತೀಯರೆಲ್ಲ ಈಗ ಒಂದಾಗಿದ್ದೇವೆ, ಯಾವುದೇ ಪ್ರತ್ಯೇಖಗಳನ್ನು ಹೊರತುಪಡಿಸಿ, ಯಾವುದೇ ತಾರತಮ್ಯವಿಲ್ಲದೆ, ‘we are one’. ಈ ಅತ್ಯಪೂರ್ಣ ಭಾವವನ್ನು ನಮಗೆ ಆರ್ಟಿಕಲ್ 370ರ ರದ್ದತಿ ಒದಗಿಸಿಕೊಟ್ಟಿದೆ. ಇದು ನನ್ನ ಭಾವನಾತ್ಮಕ ಬರವಣಿಗೆ.
ಇನ್ನು ಮುಂದೆ ಆರ್ಟಿಕಲ್ 370ರ ಅವಲಕ್ಷಣಗಳು ಮತ್ತು ಅದರ ರದ್ದತಿಯಿಂದಾದ ಲಕ್ಷಣಗಳ ಬಗೆಗೆ ವಿಶ್ಲೇಷಿಸೋಣ,
ಆರ್ಟಿಕಲ್ 370 ಯ ಉಪಬಂಧಗಳೇನು?
ಆರ್ಟಿಕಲ್ 370 ನಮ್ಮ ಭಾರತ ಸಂವಿಧಾನದ 370ನೇ ವಿಧಿ. ಈ ವಿಧಿಯು 1954ರಲ್ಲಿ ತಾತ್ಕಾಲಿಕವಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಸಂವಿಧಾನಕ್ಕೆ ಸೇರಿಸಿದ ವಿಧಿಯಾಗಿದ್ದು, ಈ ವಿಧಿಯು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನಗಳನ್ನು ನೀಡುತ್ತಿತ್ತು.
ಆರ್ಟಿಕಲ್ 370 ಏಕೆ ಬಂತು?
ಭಾರತ ಸ್ವತಂತ್ರಗೊಂಡ ನಂತರ, ಭಾರತ ಗಣರಾಜ್ಯವಾಗುವ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಭಾರತ
ಗಣರಾಜ್ಯದೊಂದಿಗೆ ಸೇರದೇ ಪ್ರತ್ಯೇಖವಾಗಿ ಉಳಿಯುವ ನಿರ್ಧಾರ ಮಾಡುತ್ತಾನೆ. ಆದರೆ, ರಾಜ ಹರಿಸಿಂಗ್ನ ಮೇಲೆ ಪಾಕಿಸ್ತಾನ ಮೂಲದ ದಾಳಿಕೋರರು ಪಾಕಿಸ್ತಾನವನ್ನು ಆಕ್ರಮಿಸಿಕೊಂಡಾಗ, 1947ರ ಅಕ್ಟೋಬರ್ 24 ರಂದು ಮಹಾರಾಜ ಹರಿಸಿಂಗ್ ಭಾರತ ಸರ್ಕಾರದ ಸಹಾಯ ಕೇಳುತ್ತಾರೆ. ಭಾರತ ಸರ್ಕಾರದ ಸೇನಾಪಡೆ ದಾಳಿಕೋರರನ್ನು ಹಿಮ್ಮೆಟ್ಟಿಸಿ ಜಮ್ಮು ಕಾಶ್ಮೀರವನ್ನು ರಕ್ಷಿಸುತ್ತದೆ.
1947ರ ಅಕ್ಟೋಬರ್ 26 ರಂದು ಜಮ್ಮು-ಕಾಶ್ಮೀರದ ರಕ್ಷಣೆ, ವಿದೇಶ ವ್ಯವಹಾರ ಮತ್ತು ಸಂಪರ್ಕ ಇಲಾಖೆಯನ್ನು ಭಾರತ ಸರ್ಕಾರದ ವಶಕ್ಕೆ ರಾಜ ಹರಿಸಿಂಗ್ ಒಪ್ಪಿಸುತ್ತಾರೆ.
ಭಾರತದ ಇತರ ರಾಜ್ಯಗಳಲ್ಲಿ ಯಾವುದೇ ಕಂಡೀಷನ್ ಅಥವಾ ವಿನಾಯಿತಿಗಳಿಲ್ಲದೆ ಭಾರತ ಗಣರಾಜ್ಯಕ್ಕೆ ಸೇರಿ ಭಾರತದ ಸಾರ್ವಭೌಮತೆಯನ್ನು ಒಪ್ಪಿಕೊಂಡಿದ್ದಾಗ, ಜಮ್ಮು-ಕಾಶ್ಮೀರದ ರಾಜ ಹರಿಸಿಂಗನನ್ನು ಕಾಪಾಡಿ ಅರೆ-ಬರೆ ನಿಯಂತ್ರಣವನ್ನು ಹೊಂದುವ ದರ್ದು ನಮ್ಮ ಭಾರತ ಸರ್ಕಾರಕ್ಕೆ ಏನಿತ್ತು?
ಜಮ್ಮು - ಕಾಶ್ಮೀರದ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ಜಮ್ಮು-ಕಾಶ್ಮೀರದ ಅಸೆಂಬ್ಲಿಯೇ ತೆಗೆದುಕೊಳ್ಳುವುದು ಸೂಕ್ತವೆನಿಸಿ, ಕೇವಲ ತಾತ್ಕಾಲಿಕ ವ್ಯವಸ್ಥೆಗಾಗಿ ಆರ್ಟಿಕಲ್ 370ನ್ನು ಸೃಷ್ಠಿಸಲಾಯಿತು. ಆದರೆ, ಆ ತಾತ್ಕಾಲಿಕ ವಿಧಿಯು 2019ರವರೆಗೂ ಮುಂದುವರೆದಿದ್ದೂ ಮಾತ್ರ ಭಾರತೀಯರ ದೌರ್ಭಾಗ್ಯ.
ಆರ್ಟಿಕಲ್ 370ರ ಉಪಬಂದಗಳೇನು?
ಈ ಆರ್ಟಿಕಲನ್ನು ತಾತ್ಕಾಲಿಕವಾಗಿ, ಮಾರ್ಪಾಡು ಮಾಡುವ ಸಲುವಾಗಿ, ವಿಶೇಷ ಉಪಬಂದಗಳೊಂದಿಗೆ ಭಾರತ ಸಂವಿಧಾನದ 21ನೇ ಭಾಗದಲ್ಲಿ ಸೇರಿಸಲಾಗಿತ್ತು.
1949ರಲ್ಲಿ ಸಂವಿಧಾನದಲ್ಲಿ ಸೇರಿಸಲಾಗಿದ್ದ ಈ ಆರ್ಟಿಕಲ್ ಮೇರೆಗೆ, ಭಾರತ ಸಂವಿಧಾನವು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಆ ಮೂಲಕ ಜಮ್ಮು-ಕಾಶ್ಮೀರ ತಮ್ಮದೇ ಆದ ಪ್ರತ್ಯೇಖ ಸಂವಿಧಾನವನ್ನು ಹೊಂದಿದ್ದರು. ಆದರೆ, ಈ ಅವಕಾಶ ಭಾರತದ ಬೇರಾವುದೇ ರಾಜ್ಯಕ್ಕೂ ಇಲ್ಲ. ಈ ವಿಧಿಯ ಅನ್ವಯ ಜಮ್ಮು-ಕಾಶ್ಮೀರವು ಹಣಕಾಸು, ರಕ್ಷಣೆ ಮತ್ತು ವಿದೇಶಿ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದ ವಿಷಯಗಳನ್ನು ಕುರಿತಂತೆ ತಮ್ಮದೇ ಕಾನೂನು ರಚಿಸಿಕೊಳ್ಳುವ ಅಧಿಕಾರವನ್ನು ಹೊಂದಿತ್ತು. ಈ ಮೂಲಕ ಜಮ್ಮು-ಕಾಶ್ಮೀರವು ಭಾರತದ ಭಾಗವಾಗಿದ್ದರೂ, ಭಾರತದ ಇತರೆ ರಾಜ್ಯಗಳಲ್ಲಿ ಜನರು ಬಾಧ್ಯರಾದ ಕಾನೂನುಗಳಿಂದ ಜಮ್ಮು-ಕಾಶ್ಮೀರ ರಾಜ್ಯದ ಜನರು ಬಾಧ್ಯರಾಗಿರಲಿಲ್ಲ.
ಭಾರತದೆಲ್ಲೆಡೆ ಚುನಾವಣೆಗಳು ನಡೆದರೆ, ಜಮ್ಮು-ಕಾಶ್ಮೀರದಲ್ಲಿ ಮಾತ್ರ ಆರು ವರ್ಷಕ್ಕೊಮ್ಮೆ ವಿಧಾನಸಭೆಯ ಚುನಾವಣೆ ನಡೆಯುತ್ತಿತ್ತು. ಭಾರತ ಸಂವಿಧಾನದ 4ನೇ ಭಾಗದಲ್ಲಿರುವ ರಾಜ್ಯ ನಿರ್ದೇಶಕ ತತ್ವ ( Directive Principles of State Policy) ಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಇದರ ಅರ್ಥ, ಪ್ರಜಾಪ್ರಭುತ್ವದ ಭಾರತದಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ಸಂವಿಧಾನದಲ್ಲಿನ ರಾಜ್ಯ ನಿರ್ದೇಶಕ ತತ್ವಗಳಡಿಯಲ್ಲಿ ರಾಜ್ಯ ನಡೆಸಬೇಕಾದ ದರ್ದು ಜಮ್ಮು-ಕಾಶ್ಮೀರಕ್ಕಿಲ್ಲ. ಹಾಗಾದರೆ, ಜಮ್ಮು-ಕಾಶ್ಮೀರವು ಭಾರತದಿಂದ ಯಾವುದೇ ಅನುದಾನ ಪಡೆಯುತ್ತಿರಲಿಲ್ಲವಾ, ಅದರ ಲೆಕ್ಕಾಚಾರ ಯಾರಿಗೆ ನೀಡಲಾಗುತ್ತಿತ್ತು...?
ಸ್ನೇಹಿತರೆ, ನಮ್ಮ ಕಾನೂನುಗಳನ್ನು ಒಪ್ಪದೆ, ನಮ್ಮ ಸಂವಿಧಾನವನ್ನು ಒಪ್ಪದೆ, ಪ್ರತ್ಯೇಖ ಸವಲತ್ತುಗಳೊಂದಿಗೆ ಬದುಕಲಿಚ್ಛಿಸಿದ ಜಮ್ಮು-ಕಾಶ್ಮೀರಕ್ಕೆ ಭಾರತದ ತೆರಿಗೆ ಸಂಗ್ರಹದ ಹಣದಲ್ಲಿ ಶೇ. 10 ರಷ್ಟನ್ನು ಎಪ್ಪತ್ತು ವರ್ಷಗಳಿಂದಲೂ ಭಾರತ ಸರ್ಕಾರವು ನೀಡುತ್ತಾ ಬಂದಿದೆ. why..?
ಇಷ್ಟರ ನಡುವೆಯೂ ಕಾಶ್ಮೀರದ ಪ್ರಜೆ ಕಪಿ ಮುಷ್ಠಿಯಲ್ಲಿ ಸಿಲುಕಿ ಬಡವನಾಗಿ, ಭ್ರಷ್ಟರ ಬಲಿಯಾಗಿ, ಪಾಪಿಗಳ ಕೈಗೊಂಬೆಯಾಗಿ ನರುಳುತ್ತಿದ್ದ. ನಮ್ಮ ಕಾನೂನುಗಳನ್ನು ಒಪ್ಪದಿದ್ದ ಪ್ರತ್ಯೇಖ ಕಾನೂನುಗಳನ್ನು ಹೊಂದಿದ್ದ ಜಮ್ಮು-ಕಾಶ್ಮೀರವು ಭಾರತ ಬಾವುಟಕ್ಕೆ ಗೌರವ ಸೂಚಿಸುವ ಬಾಧ್ಯತೆಯನ್ನು ಹೊಂದಿರಲಿಲ್ಲ. ಅಂತವರಿಗೆ ನಾವು ಕಷ್ಟ ಪಟ್ಟು ಸಂಪಾದಿಸಿ ಕಟ್ಟಿದ ತೆರಿಗೆ ಹಣದಲ್ಲಿ ಶೇ. 10 ಅನುದಾನ ಯಾವ ಪುರುಷಾರ್ಥಕ್ಕೆ...?
ಭಾರತದ ತೆರಿಗೆ ಸಂಗ್ರಹದಲ್ಲಿ ಶೇ. 10 ರಷ್ಟು ಅನುದಾನ ಪಡೆದ ಜಮ್ಮು-ಕಾಶ್ಮೀರದ ಜನಸಂಖ್ಯೆ ಎಷ್ಟು ಗೊತ್ತಾ...? ಅದು ಭಾರತದ ಒಟ್ಟು ಜನಸಂಖ್ಯೆಯ ಕೇವಲ ಒಂದು ಪರ್ಸೆಂಟ್.
ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯಲ್ಲಿ ಹೇರುವ ನಿರ್ಬಂಧಗಳು ಕೂಡ ಜಮ್ಮು-ಕಾಶ್ಮೀರವನ್ನು ನಿರ್ಬಂಧಿಸುವುದಿಲ್ಲ. ಭಾರತದಲ್ಲಿನ ಎಲ್ಲಾ ರಾಜ್ಯದ ಜನರು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಿ ಬೇಕಾದರು ಆಸ್ತಿಯನ್ನು ಹೊಂದುವ ಖರೀದಿಸುವ ಹಕ್ಕು ಇದೆ. ಆದರೆ ಜಮ್ಮು-ಕಾಶ್ಮೀರದಲ್ಲಿ ಖರೀದಿಸುವಂತಿರಲಿಲ್ಲ... ಏಕೆ...?
ಜಮ್ಮು-ಕಾಶ್ಮೀರದ ಜನತೆ ಎರಡು ಪೌರತ್ವಗಳನ್ನು ಹೊಂದಬಹುದಿತ್ತು. ಅಂದರೆ, ತಮ್ಮ ರಾಜ್ಯದ ಒಂದು ಪೌರತ್ವ ಮತ್ತು ಭಾರತದ ಮತ್ತೊಂದು, ಆದರೆ ಭಾರತದ ಇತರ ರಾಜ್ಯಗಳಿಗೆ ಈ ಅವಕಾಶ ಸಾಧ್ಯವಿಲ್ಲ... ಏಕೆ...?
ಭಾರತದ ಯಾವುದೇ ರಾಜ್ಯದ ಹೆಣ್ಣು ಮಕ್ಕಳು ಬೇರೊಂದು ರಾಜ್ಯಕ್ಕೆ ವಿವಾಹವಾಗಿ ಹೋದರೂ ತಮ್ಮ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ, ಆದರೆ ಜಮ್ಮು-ಕಾಶ್ಮೀರದ ಹೆಣ್ಣು ಮಕ್ಕಳು ಕಳೆದುಕೊಳ್ಳುತ್ತಾರೆ. ಇದು ಸಮಾನತೆಯಾ...?
ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯಗಳಿಂದ ಬಂದು ನೆಲಸಿದವರಿಗೆ ಮತದಾನ ಮಾಡುವ ಹಕ್ಕಿರಲಿಲ್ಲ, ಇದು ಸಮಾನತೆಯೇ...? ಭಾರತ ಸರ್ಕಾರದ ಅತ್ಯಂತ ಪರಿಣಾಮಕಾರಿ ಕಾಯ್ದೆಗಳಾದ - RTI, RTE ಗಳು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗುತ್ತಿರಲಿಲ್ಲ. ಏಕೆ...? ಆ ರಾಜ್ಯದ ಜನರು ಮಾನವೀಯತೆಗೆ ಹೊರತಾದವರ ಅಥವಾ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅನುಮತಿ ಪಡೆದವರಾ...?
ಸ್ನೇಹಿತರೆ,
ಈ ಎಲ್ಲಾ ಪ್ರಶ್ನೆಗಳು ನಮ್ಮಲ್ಲಿ ಒಂದು ಅಸಹನೆ ಮತ್ತು ಅಸಮ್ಮತಿಯನ್ನು ಹುಟ್ಟುಹಾಕುತ್ತಿದೆಯಲ್ಲ, ಆ ಅಸಮ್ಮತವನ್ನು ಆರ್ಟಿಕಲ್ 370ರ ರದ್ದತಿಯು ಹೋಗಲಾಡಿಸಿ ನಮ್ಮ ಸಂವಿಧಾನದ ಸಾರ್ವಭೌಮತೆಯನ್ನು ಸಾರಿದೆ.
- ಈ ರದ್ದತಿಯಿಂದಾಗಿ, ಜಮ್ಮು-ಕಾಶ್ಮೀರದ ಆಡಳಿತವು ಕೇವಲ ಮೂರು ಕುಟುಂಬಗಳ ಕಪಿಮುಷ್ಠಿಯಿಂದ ಬಿಡುಗಡೆಗೊಂಡಿದೆ. ಈ ರದ್ದತಿಯಿಂದಾಗಿ ಜಮ್ಮು-ಕಾಶ್ಮೀರಕ್ಕೆ ಭಾರತ ಸರ್ಕಾರವು ನೀಡುವ ಅನುದಾನಕ್ಕೆ ಲೆಕ್ಕಾಚಾರವಿರುತ್ತದೆ. ಈ ರದ್ದತಿಯಿಂದಾಗಿ ಭಾರತ ಸಂವಿಧಾನದ ಶ್ರೇಷ್ಠ ರಾಜ್ಯ ನಿರ್ದೇಶಕ ತತ್ವಗಳು ಜಮ್ಮು-ಕಾಶ್ಮೀರದಲ್ಲೂ ಪಾಲಿಸಲ್ಪಡುತ್ತವೆ.
- ಈ ರದ್ದತಿಯಿಂದಾಗಿ ಜಮ್ಮು-ಕಾಶ್ಮೀರದಲ್ಲೂ ಕೈಗಾರಿಕೆ ವ್ಯಾಪಾರಗಳು ಪ್ರಾರಂಭವಾಗಿ ಅಲ್ಲಿನ ಬಡವರಿಗೂ, ಯುವಕರಿಗೂ ಕೆಲಸಗಳು ದೊರೆಯುತ್ತವೆ. ಮತ್ತು ಆ ಮೂಲಕ ಅಲ್ಲಿನ ಬಡಜನರು ಹಣಕ್ಕಾಗಿ ಮಾಡುತ್ತಿದ್ದ ಅಮಾನವೀಯ ಕೆಲಸಗಳು ಕೊನೆಯಾಗುತ್ತವೆ.
- ಈ ರದ್ದತಿಯಿಂದಾಗಿ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮಾನ ಅಳಿಸಿ ಹೋಗಿ ಆ ರಾಜ್ಯವು ಕೂಡ ಭಾರತದ ಇತರ ರಾಜ್ಯಗಳಂತೆ ಎಲ್ಲಾ ಹಕ್ಕು ಬಾಧ್ಯತೆಗಳಿಗೆ ಹೊಣೆಯಾಗುತ್ತದೆ. ದ್ವಿ-ನಾಗರಿಕತ್ವವು ಕೊನೆಯಾಗಿ ಭಾರತದ ಏಕ ನಾಗರಿಕತ್ವವು ಜಾರಿಯಾಗುತ್ತದೆ.
- ಜಮ್ಮು-ಕಾಶ್ಮೀರದ ಪ್ರತ್ಯೇಖ ಬಾವುಟವು ಬಿದ್ದು ಭಾರತದ ರಾಷ್ಟ್ರಧ್ವಜವು ರಾರಾಜಿಸುತ್ತದೆ. ಭಾರತದ ತುರ್ತು ಹಣಕಾಸು ಆದೇಶವು ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯಿಸುತ್ತದೆ.
- ಭಾರತಾದ್ಯಂತ ಅನ್ವಯವಾಗುವ ಅಲ್ಪಸಂಖ್ಯಾಯಿತರ ಮೀಸಲಾತಿಗಳೂ (16%) ಜಮ್ಮು-ಕಾಶ್ಮೀರದಲ್ಲೂ ಅನ್ವಯವಾಗಲಿದೆ. RTI, RTE ಗಳು ಅಲ್ಲಿಯೂ ಅನ್ವಯವಾಗಲಿವೆ, ಜಮ್ಮು-ಕಾಶ್ಮೀರದ ಹೆಣ್ಣುಮಕ್ಕಳು ಇತರೆ ರಾಜ್ಯಕ್ಕೆ ವಿವಾಹವಾಗಿ ಹೋದರೂ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಹೊಂದಲಿದ್ದಾರೆ.
- ಸಂವಿಧಾನದ 4ನೇ ಭಾಗದಲ್ಲಿರುವ ಮೂಲಭೂತ ಕರ್ತವ್ಯಗಳು ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯಿಸುತ್ತವೆ. ಈ ರದ್ದತಿಯಿಂದಾಗಿ ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದೆ.
- ಈ ರದ್ದತಿಯಿಂದಾಗಿ ಜಮ್ಮು-ಕಾಶ್ಮೀರದಿಂದ ಲಡಖ್ ಪ್ರತ್ಯೇಖಗೊಂಡು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿದೆ.
- ಒಟ್ಟಾರೆ, ಭಾರತವು ಈಗ ಸರ್ವ ಸಮಾನವಾಗಿದೆ, ಭಾರತವು ಈಗ ನೈಜ ಅರ್ಥದಲ್ಲಿ ಏಕವಾಗಿದೆ. ಭಾರತ ಸಂವಿಧಾನವು ಇಂದು ಸಂಪೂರ್ಣ ‘ಸಾರ್ವಭೌಮತ್ವ’ ವಾಗಿದೆ ಮತ್ತು ಸರ್ವರಿಗೂ ಸಮಾನವಾಗಿದೆ. ಅಂತಿಮವಾಗಿ, ಭಾರತೀಯರು ಈ 70 ವರ್ಷ ಅನುಭವಿಸಿದ ಸಂವಿಧಾನಿಕ ತಾರತಮ್ಯತೆ ಈ ರದ್ದತಿಯಿಂದ ಕೊನೆಯಾಗಿದೆ.
ಥ್ಯಾಂಕ್ಸ್ ಟು ಮೋದಿಜಿ & ಅಮಿತ್ ಷಾ
What's Your Reaction?